ಶ್ರೀ ಭಾಷ್ಯ ಹಿಂದೂ ತತ್ವಜ್ಞಾನಿ ರಾಮಾನುಜರ (೧೦೧೭–೧೧೩೭) ಅತ್ಯಂತ ಪ್ರಸಿದ್ಧ ಕೃತಿ. ಇದರಲ್ಲಿ ಅವರು ಬಾದರಾಯಣನ ವೇದಾಂತ/ಬ್ರಹ್ಮಸೂತ್ರದ ಕುರಿತು ವ್ಯಾಖ್ಯಾನಿಸಿದ್ದಾರೆ. == ವಿವರಣೆ == ಉಪನಿಷತ್ತುಗಳು, ಭಗವದ್ಗೀತೆ ಮತ್ತು ಇತರ ಸ್ಮೃತಿ ಪಠ್ಯಗಳು, ಹಿಂದಿನ ಆಚಾರ್ಯರು ಮತ್ತು ವೇದಾಂತ-ಸೂತ್ರಗಳ ವ್ಯಾಖ್ಯಾನದ ಆಧಾರದ ಮೇಲೆ ರಾಮಾನುಜರು ತಮ್ಮ ವ್ಯಾಖ್ಯಾನದಲ್ಲಿ ವಿಶಿಷ್ಟಾದ್ವೈತದ ಮೂಲಭೂತ ತತ್ವಶಾಸ್ತ್ರದ ತತ್ವಗಳನ್ನು ಪ್ರಸ್ತುತಪಡಿಸುತ್ತಾರೆ. ಶಂಕರರ ಅದ್ವೈತ ವೇದಾಂತವನ್ನು ಮತ್ತು ನಿರ್ದಿಷ್ಟವಾಗಿ ಅವರ ಮಾಯಾ ಸಿದ್ಧಾಂತವನ್ನು ನಿರಾಕರಿಸುವ ಮೂಲಕ ಇದನ್ನು ರಚಿಸಲಾಗಿದೆ. ಈ ಕೃತಿಯಲ್ಲಿ, ಅವರು ವಾಸ್ತವದ ಮೂರು ವರ್ಗಗಳ ಕುರಿತು ವಿವರಿಸುತ್ತಾರೆ (ತತ್ತ್ವಗಳು) ಅವೆಂದರೆ, ದೇವರು, ಆತ್ಮ ಮತ್ತು ವಸ್ತು. ಇವುಗಳನ್ನು ಮಾಧ್ವರಂತಹ ನಂತರದ ವೈಷ್ಣವ ದೇವತಾಶಾಸ್ತ್ರಜ್ಞರು ಬಳಸಿದ್ದಾರೆ. ವಿಮೋಚನೆಗೆ (ಮೋಕ್ಷ) ಸಾಧನವಾಗಿ ಭಕ್ತಿಯ ತತ್ವಗಳನ್ನು ಸಹ ಇದರ ಮೂಲಕ ಅಭಿವೃದ್ಧಿಪಡಿಸಲಾಯಿತು. ದೇಹ ಮತ್ತು ಆತ್ಮದ ನಡುವಿನ ಸಂಬಂಧವನ್ನು ಅವರು ಈ ಕೃತಿಯಲ್ಲಿ ವಿವರಿಸುತ್ತಾರೆ. ರಾಮಾನುಜರು ವೇದಾಂತ-ದೀಪ ಮತ್ತು ವೇದಾಂತ-ಸಾರವನ್ನು ಶ್ರೀ ಭಾಷ್ಯವನ್ನು ಅರ್ಥ ಮಾಡಿಸಲೋಸುಗ ಬರೆದರು. == ಸಹ ನೋಡಿ == ಗೀತಾ ಭಾಷ್ಯ ವೇದಾರ್ಥಸಂಗ್ರಹ ಶತದೂಷನಿ == ಉಲ್ಲೇಖಗಳು == == ಮೂಲಗಳು == ಹಾಜಿಮೆ ನಕಮುರಾ ಮತ್ತು ಟ್ರೆವರ್ ಲೆಗೆಟ್, ಎ ಹಿಸ್ಟರಿ ಆಫ್ ಅರ್ಲಿ ವೇದಾಂತ ಫಿಲಾಸಫಿ, ಸಂಪುಟ 2, ನವದೆಹಲಿ, ಮೋತಿಲಾಲ್ ಬನಾರ್ಸಿದಾಸ್ (1983) ಅದ್ವೈತ ಆಶ್ರಮ (2003). ಶ್ರೀ ರಾಮಾನುಜರ ಪ್ರಕಾರ ಬ್ರಹ್ಮ ಸೂತ್ರಗಳು. 81-7505-006-3 == ಬಾಹ್ಯ ಕೊಂಡಿಗಳು == ಎಸ್.ಎಸ್.ರಾಘವಾಚಾರ್ ಅವರಿಂದ ಶ್ರೀಭಾಷ್ಯದ ಅವಲೋಕನ ಜಾರ್ಜ್ ಥಿಬೌಟ್ ಅವರಿಂದ ಶ್ರೀಭಾಷ್ಯದ ಅನುವಾದ ಶ್ರುತ ಪ್ರದೀಪಿಕಾ , ಸುದರ್ಶನ ಸೂರಿಯವರಿಂದ ಶ್ರೀಭಾಷ್ಯದ ಸಂಸ್ಕೃತ ವ್ಯಾಖ್ಯಾನವು ವಿವರವಾದ ಇಂಗ್ಲಿಷ್ ಪರಿಚಯದೊಂದಿಗೆ